ವಕ್ರಚಲನೆ
	ಭೂಮಿಯಿಂದ ಕಾಣುವಂತೆ ಗ್ರಹಗಳ ಪೂರ್ವ-ಪಶ್ಚಿಮ ದಿಶಾಚಲನೆ (ರಿಟ್ರೊಗ್ರೇಡ್ ಮೋಶನ್). ಖಗೋಳದಲ್ಲಿ ನಮಗೆ ಗೋಚರಿಸುವ 7 ಚರಕಾಯಗಳಿವು: ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ. ಸ್ಥಿರನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ ಇವುಗಳ ಸ್ಥಾನಪಲ್ಲಟವನ್ನು (ಭೂಮಿಯಲ್ಲಿಯ ನಾವು) ವೀಕ್ಷಿಸಿ ಗುರುತಿಸಿದರೆ ಸೂರ್ಯ ಮತ್ತು ಚಂದ್ರ ಸದಾ ಪಶ್ಚಿಮ-ಪೂರ್ವ ದಿಶೆಯಲ್ಲಿಯೇ ಸ್ಥಾನಪಲ್ಲಟಿಸುವುದನ್ನು ಕಾಣಬಹುದು. ಈ ಸಹಜ ಸ್ಥಾನಪಲ್ಲಟಕ್ಕೆ ಮಾರ್ಗಚಲನೆ (ಡೈರೆಕ್ಟ್ ಮೋಶನ್) ಎಂದು ಹೆಸರು. ಉಳಿದ 5 ಚರಕಾಯಗಳೂ ಮಾರ್ಗಚಲನೆಯನ್ನೇ ಪ್ರದರ್ಶಿಸುವುವಾದರೂ ಒಮ್ಮೊಮ್ಮೆ ನಮಗೆ ಕಾಣುವಂತೆ ಅವು ಪೂರ್ವ-ಪಶ್ಚಿಮ ದಿಶಾಚಲನೆಯನ್ನು ಪ್ರದರ್ಶಿಸುವುದೂ ಉಂಟು. ವಾಸ್ತವವಾಗಿ ಇದೊಂದು ಕಣ್ಕಟ್ಟು ಭೂಚಲನೆಯ ಪರಿಣಾಮ.	
  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ